Monday, February 16, 2009

ನಮ್ಮ ಪ್ರೀತಿಯ ಅಪ್ಪು

ನಮ್ಮ ಪ್ರೀತಿಯ ಅಂಕಲ್ ಇವರು ಅಪ್ಪು,
ಇವ್ರ ಪ್ರಕಾರ ಅಂಕಲ್ ಅಂತ ಕರಿಯೋದೆ ದೊಡ್ಡ ತಪ್ಪು.
ಆದರೆ ನಾವೇನು ಮಾಡೋದು ಹೇಳು ಅಪ್ಪು,
ನಿನಗೆ ವಯಸಾಗಿದೆ ನೀನಿದನ ಒಪ್ಪು.


ಇವರು ಇಷ್ಟವಾಗಿ ತಿಂತಾರೆ ಕರಿದ ಸೊಪ್ಪು.
ಇವರಿಗೆ ಇಷ್ಟ ಆಗೋ ಕಾಫಿ ರೀತಿ ಕಪ್ಪು,
ಬೆಳ್ಳಂ ಬೆಳಗ್ಗೆ ಇವರ ಕೈಯಲ್ಲಿ ಇರುತ್ತೆ ಕಾಫಿ ಕಪ್ಪು,
ಜೊತೆಗೆ ಇಲ್ಲ ಅಂದ್ರೆ ದಮ್ಮು ಇವರ ಗತಿ ಅಪ್ಪು.

ಮಸ್ತಿ ಅಂದರೆ ಸಾಕು ಯಾವಾಗಲು ಇವರಿಗೆ ಒಪ್ಪು,
ಆದರೆ ಇವರ ಜೊತೆ ಹೋಟೆಲ್ಗೆ ಹೋಗೋದೇ ಒಂದು ತಪ್ಪು,
ಯಾಕೆಂದೆರೆ ಕೊಡ್ತಾರೆ ಇವರು ಸಾವಿರ ಸಾವಿರ ಟಿಪ್ಪು,
ಯಾಕೆ ಅಂತ ಕೇಳಿದರೆ ಕೋಪದಿಂದ ಕಡಿಯ್ತಾರೆ ಲಿಪ್ಪು(ಹಲ್ಲು).

ಖುಷಿಯಾದರೆ ಕುಡಿಯುವೆವು ನಾವು ರಮ್ಮು , ಜಿನ್ನು ಒಂದು ಸಿಪ್ಪು,
ಆದರೆ ಇವರು ಮೇಲೆ ಎತ್ತಿದರೆ ಇಳಿಸೋಲ್ಲ ಬಾಟಮ್ಸ್ ಅಪ್ಪು.
ನೋಡಿದರೆ ಆಗುವಿರಿ ನೀವು ಕೂಡ ಬೆಪ್ಪು,
ಹಾಗೆ ಕುಡಿಯ್ತಾರೆ ಈ ನಮ್ಮು ಅಪ್ಪು.


ಇವರ ತಲೆ ನೋಡಿ ನಾವೆಲ್ಲ ಆದ್ವಿ ಬೆಪ್ಪು,
ಅದರಲ್ಲಿ ನಮ್ಮದೇನು ಇಲ್ಲ ನೋಡಿ ತಪ್ಪು.
ಬಾರಿ ಕೂಲ್ ಆಗಿ ಇರ್ತಾರೆ ಈ ನಮ್ಮ ಅಪ್ಪು,
ಆದ್ರೆ ಇವರಿಗೆ ಕೋಪ ಬಂದ್ರೆ ಆಗ್ತಿವಿ ನಾವು ಗಪ್ಪು ಚಿಪ್ಪು.

ವ್ಯಾಲೆಂಟೈನ್ಸ್ ಡೇಗೆ ಸಿಗತ್ತೆ ಅಂದ್ರು ಇವರು ಅಪ್ಪು,
ಆದ್ರೆ ಬಿಡಲಿಲ್ಲ ಮುತಾಲಿಕ್ ಇವರಿಗೆ ಮಾಡೋಕೆ ಆ ತಪ್ಪು.
ಒಂಟಿಯಾಗೇ ಉಳಿದರು ನಮ್ಮ ಅಪ್ಪು,
ಇದು ಯಾವ ಜನುಮದಲ್ಲಿ ಮಾಡಿದ ತಪ್ಪು?

ನಮ್ಮ ಪ್ರೀತಿಯ ಅಂಕಲ್ ಇವರು ಅಪ್ಪು,
ಹೋಗಕ್ಕೆ ಮೊದಲು ಕೊಡಬೇಕು ಇವರಿಗೆ ಒಂದು ಪ್ರೀತಿಯ ಅಪ್ಪು.




No comments:

Post a Comment