ಕೆಂಪು ಪಟ್ಟಿ, ಹಳದಿ ಪಟ್ಟಿ ನಮ್ಮ ಧ್ವಜವು, ಕನ್ನಡ;
ಮೇಲಿಂದ ಮೇಲೆ ನೀ ಹಾರಿಸದನ.
ಕಾವೇರಿ, ಕೃಷ್ಣ, ತುಂಗ, ನಮ್ಮ ನದಿಗಳು, ಕನ್ನಡ;
ತೀರ್ಥವೆಂದು ಎಣಿಸಿ ನೀ ಸೇವಿಸದನ.
ಗಂಗ, ಚೋಳ, ಕದಂಬರು ನಮ್ಮ ರಾಜರು , ಕನ್ನಡ;
ಹೆಮ್ಮೆಯಿಂದ ಸ್ಮರಿಸು ನೀ ಅವರನ.
ರನ್ನ, ಪಂಪ, ಹರಿಹರ ನಮ್ಮ ಕವಿಗಳು, ಕನ್ನಡ;
ಶ್ರಧ್ಧೆಯಿಂದ ಓದು ನೀನವರ ಕಾವ್ಯ ಕವನ.
ಆಗಿರಬೇಡ ನೀ ನಿರಾಭಿಮಾನಿ,
ಆಗಬೇಡ ನೀ ದುರಾಭಿಮಾನಿ,
ಓ ಕನ್ನಡಾಭಿಮಾನಿ, ಎಂದೆಂದಿಗೂ ನೀ ಆಗಿರು
ಸ್ವಾಭಿಮಾನಿ ಕನ್ನಡಾಭಿಮಾನಿ.
ಭಾರತಾಂಬೆಯ ನೆಚ್ಚಿನ ಮಗಳಿವಳು ಕನ್ನಡಾಂಬೆ,
ಕೈ ಮುಗಿದು ನಮಿಸು ನೀನೀಕೆಗೆ.
No comments:
Post a Comment