Friday, March 26, 2010

ಏಕೆ



ನನಗೇಕೆ ಬೇಕು ಈ ಲೋಕದ ಹಂಗು?
ಲೋಕವೇ ನೀ ಆಗಿರುವಾಗ.



ಮಾತೇಕೆ ಆಡಲಿ ನಾನು ನಿನ್ನೊಡನೆ?
ನನ್ನ  ಮನದಾಳದ ಗುಟ್ಟು ನಿನಗೆ ತಿಳಿದಿರುವಾಗ.






ನಿನ್ನೊಡನೆ ಜಗಳವೇತಕೆ ಆಡಲಿ ನಾನು?
ನೀನೆ ಗೆಲ್ಲಲಿ ಎಂದು ನಾ ಬಯಸುವಾಗ.


ನನ್ನೊಡನೆ ಏತಕೆ ನಿನ್ನ ಅಹಂಕಾರ?
ನಾನು ನೀನೆ ಆಗಿರುವಾಗ.


ನೀನಿಲ್ಲದ ಬಾಳು ನನಗೇಕೆ ಬೇಕು?
ನನ್ನ  ಬಾಳು  ತುಂಬಾ ನೀ ತುಂಬಿರುವಾಗ.

ಚಿಂತೆ ಏತಕೆ ಮಾಡಲಿ ನಾ?
ನನ್ನ  ಚಿಂತಾಮಣಿ ನೀನಿರುವಾಗ.


ನಮಗೇಕೆ ಈ ಲೋಕದ ಹಂಗು?
ನನಗೆ ನೀನು, ನಿನಗೆ ನಾನು ಇರುವಾಗ..


ನಮಗೇಕೆ ಈ ಲೋಕದ ಹಂಗು?
ನಾವಿಬ್ಬರು ಜೊತೆಗಿರುವಾಗ. 

1 comment: