ಕಲಾವಿದ(ಕುಡುಕ) ರಂಗ ಮಂದಿರದ ಮಧ್ಯಕ್ಕೆ ಬಂದು ಕೆಲವು ಸನ್ನೆಗಳನ್ನು ಮಾಡುವನು. ಪ್ರೇಕ್ಷಕರಿಗೆ ಅರ್ಥವಾಗದ್ದನ್ನು
ಮನಗೊಂಡು ಮಾತನಾಡಲು ಶುರು ಮಾಡುವನು.
ಕುಡುಕ :ಏನು ಅರ್ಥ ಆಗಲಿಲ್ಲ ತಾನೆ? ಸರಿ ನಾ ಮಾಡಿದ ಸನ್ನೆಗಳ ಅರ್ಥ ಹೇಳ್ತೀನಿ ಕೇಳಿ. ನಾನೇನು ಹೇಳ್ದೆ ಅಂದ್ರೆ, "ನಾನೇನೋ ಕುಡುಕ ನಿಜ. ಆದ್ರೆ ನಾನು ಕುರುಡಾನೂ ಅಲ್ಲ, ಮೂಕನೂ ಅಲ್ಲ. ಎರಡು ನಿಮಿಷ ಕಣ್ಮುಚ್ಕೊಂಡು ಸನ್ನೆ ಮಾಡಿದ್ರೆ, ನಾನು ಯಾವ್ ಕಡೆ ತಿರುಗಿದೀನಿ ಅಂತ ನನಗೆ ಗೊತ್ತಾಗ್ಲಿಲ್ಲಾ , ನಾನೇನು ಹೇಳ್ತಾ ಇದ್ದೀನಿ ಅಂತ ನಿಮ್ಗೆ ಗೊತ್ತಾಗ್ಲಿಲ್ಲ. ಬೇಕ ನಮಗೆ ಈ ಕುರುಡನ ಮೂಕ ಕಥೆ. ನಾಟಕದ ಹೆಸರೇನೋ 'ಕುಡುಕ ಕುರುಡನ ಮೂಕ ಕಥೆ ' ಅಂತ ಇರಬೋದು, ಆದ್ರೆ ನಮಗೆ ಅದ್ರ ಗೋಜೇ ಬೇಡ. ಸುಮ್ನೆ ಈ ಕುಡುಕನ ಕಥೆ ಕೇಳಿ ಮಜಾ ತೊಗೊಂಡು ಹೋಗಿ. ಕುರುಡನ ಮೂಕ ಕಥೆ ಹೇಳಕ್ಕೆ ನಾನೇನು Helen Kellerಉ ಅಲ್ಲ, ನಮ್ಮ ನಿರ್ದೇಶಕರು Annie Sullivan ತರಹದ Miracle Worker ಕೂಡ ಅಲ್ಲ. ಏನು ಹಂಗೆ ನೋಡ್ತಾ ಇದ್ದೀರಾ? ಅದೇ ನಮ್ಮ ಅಮಿತಾಬ್ ಬಚ್ಚನ್ ಮತ್ತು ರಾಣಿ ಮುಕರ್ಜಿ ಅವರು ಮಾಡಿರುವ Black movie ಇದ್ಯಲ್ಲ ಅದು ನಿಜವಾಗ್ಲೂ ಹೇಳ್ಬೇಕು ಅಂದ್ರೆ ಹಾಲಿವುಡ್ ನಲ್ಲಿ ಮಾಡಿದ Miracle Worker ಅನ್ನೋ ಚಿತ್ರದ ರಿಮೇಕ್. ಆ ಚಿತ್ರಕ್ಕೆ ಮೂಲ ಸ್ಪೂರ್ಥಿ ಈ Annie Sullivan ಮತ್ತು Hellen Keller. ಆ ಚಿತ್ರದ ತರಾನೆ ನಮ್ ನಾಟಕ ಅನ್ಕೊಂಡ್ರ? ಇಲ್ಲ ಕಣ್ರೀ, ಹಳೇ ಕಾಲದ ಮೂಕಿ ಚಿತ್ರ ಅಲ್ಲ ನಮ್ದು ಈಗಿನ ಕಾಲದ ಟಾಕಿ ನಮ್ದು."
ನಿಜ ಹೇಳೋದೆ ಆದ್ರೆ, ಈ ನಾಟಕದ ಹೆಸ್ರು "ಕುಡುಕ ಕುರುಡ ಕಿವುಡನ ಮೂಕ ನಾಟಕ" ಅಂತ ಇರ್ಬೇಕಿತ್ತು. ಆದರೆ ನೀವು ಕುರುಡ,ಕುರುಡ,ಕಿವುಡ ಹಾಗು ಮೂಕ ಬೇರೆ ಬೇರೆ ಅಂತ ತಿಳ್ಕೊಬೋದು ಅಂತ ಆ title ಬೇಡ ಅನ್ಕೊಂಡ್ವಿ. ಸರಿ next "ಕುಡುಕ ಕಿವುಡನ ಮೂಕ ನಾಟಕ" ಅಂತ ಮಾಡೋಣ ಅಂತ ಅನ್ಕೊಂಡ್ವಿ. ಆದರೆ ನಮ್ಮ ಕಲಾವಿದರಿಗೆ ಕಿವಿ ಮುಖ್ಯ ಅಂಗ ನೋಡಿ. ನಾವು ಕಲಾವಿದರು ಹೇಗೆ ಅಂದ್ರೆ ತಿನ್ನಕ್ಕೆ ನಾಕು ಕಾಳು ಇಲ್ಲ ಅಂದ್ರೂ, ಎರಡು ಪ್ರಷಂಸೆ ಮಾತು ಕಿವಿಗೆ ಬೀಳುತ್ತೆ ಅಂದ್ರೆ ಸಾಕು, ಎಷ್ಟು ಕಷ್ಟ ಆದ್ರೂ ಹೋಗಿ ನಾಟಕ ಮಾಡಿ ಬರ್ತೀವಿ. ಏನು ಬರೀ ಬೊಗಳೆ ಮಾತು ಅಂತ ಹಾಗೆ ನೋಡ್ತಾ ಇದ್ದೀರ..? ಹೇಳಿದ್ರೆ ನೀವು ನಂಬೋದಿಲ್ಲ, ನಂಗೆ ಬರೋ ಸಂಭಾವನೆ ಏನದ್ರು ನಿಮ್ಮ ಮಕ್ಕಳಿಗೆ pocket money ಅಂತ ನೀವು ಕೊಟ್ರೆ, ಖಂಡಿತವಾಗಿ ನಿಮ್ಮ ಮುಖದ ಮೇಲೆ ನಕ್ಕು(ಈಗಿನ ಕಾಲದವರ್ರದ್ರೆ ಉಗಿದು ) ಅಲ್ಲೇ ಬಿಸಾಕಿ ಹೋಗ್ತಾರೆ. ಆದ್ರೂ ಬೇಜಾರಿಲ್ಲ ನೋಡಿ ನಮ್ಗೆ. ನಾಟಕ ಆದ ಮೇಲೆ ನೀವು ಹೊಡಿಇತಿರಲ್ಲಾ ಚಪ್ಪಳೆ, ಅದರ ಸಪ್ಪಳ ನಮ್ಮ ಕಿವಿ ಮುಟ್ಟಿದಾಗ, ಬರೋ ಖುಶಿನ ಎಷ್ಟೇ ಸಾವಿರಗಳು ಸುರಿದ್ರು ಬರೊಲ್ಲಾ. ಬಹುಶ: ಲಕ್ಷಗಳು, ಇಲ್ಲ ಅಂದ್ರೆ ಕೋಟಿಗಳು ಸುರಿದ್ರೆ
ಬರ್ಬೋದೇನೋ ಗೊತ್ತಿಲ್ಲ. ಏಕೆ ಅಂದ್ರೆ ನಮ್ಮಂತ ಕಲಾವಿದರು ಜೀವನ ಪರ್ಯಂತ ಲಕ್ಷಗಳು ಹಾಗು ಕೋತಿಗಳು ಹೇಗೆ ಇರುತ್ತೆ ಅಂತ ನೋಡಿರೋದೆ ಇಲ್ಲ. ಅದರಿಂದ ಲಕ್ಷಗಳು ಹಾಗು ಕೋಟಿಗಳು ಸುರಿದರೆ ಹೇಗೆ ಇರುತ್ತೆ ಅಂತ ಗೊತ್ತೇ ಇರಲ್ಲ ನಮಗೆ.
ಸರಿ ಇನ್ನ ನನ್ನ ಪಾತ್ರಕ್ಕೆ ಬರೋಣ. ಹುಟ್ಟು ಕುಡುಕ ಆಗಿರೋ ನನಗೆ, ನಿರ್ದೇಶಕರು ಈ ಪಾತ್ರೆ ಕೊಟ್ಟಿದ್ದು ನನಗೆ ಆಶ್ಚರ್ಯನೂ ಆಗಲಿಲ್ಲ, ಈ ಪಾತ್ರ ನಿಭಾಯಿಸೋದಕ್ಕೆ ನನಗೆ ಕಷ್ಟಾನೂ ಆಗಲಿಲ್ಲ. ಈ ನಾಟಕದಲ್ಲಿ ನಾನೊಬ್ಬ ಆದರ್ಷ ಕುಡುಕ. ನಾನು ಅಖಿಲ ಭಾರತ ಕುಡುಕರ ಸಂಘದ, ಪ್ರಾಂತೀಯ ಪ್ರಚಾರಕ. ಇವತ್ತು ನಾನು ಇಲ್ಲಿಗೆ ಬಂದಿರೋದು ನಮ್ಮ ಸಂಘದ ವತಿಯಿಂದನೇ . ನನ್ನ ಉದ್ದೇಷ ನಮ್ಮ ಕುಡುಕರ ನೋವು, ನಲಿವುಗಳನ್ನ ನಿಮ್ಮ ಮುಂದೆ ಬಿಚ್ಚಿಡೋದು. ಇತ್ತೀಚಿಗೆ ನಮ್ಮ ಕುಡುಕರ imageಗೆ ಬಾರಿ ಹೊಡೆತ ಬಿದ್ದಿದೆ. Desperate times call for desperate measures ಅಂತಾರಲ್ಲ ಹಾಗೆನೇ, ಈವತ್ತು ನಮ್ಮ ಸಂಘ ಅಂತ ಪರಿಸ್ಥಿತಿಯಲ್ಲಿ ಇದೆ ಮತ್ತು ಅಂತಾದೆ measures ಕೂಡ ತೊಗೊಂತಾ ಇದೆ. ಅದಕ್ಕೆ ಇವತ್ತು ನಾನು ಇಲ್ಲಿ ಬಂದಿರೋದು. ಮೊದಲಿನಿಂದಲೂ ನಮ್ಮ ಕುಡುಕರಿಗೆ ಶತ್ರುಗಳು ತುಂಬಾ. ಮನೆ level ಅಲ್ಲಿ ಹೆಂಡಿತಿಯಿಂದ ಹಿಡಿದು, ದೇಶದ level ಅಲ್ಲಿ ಗಾಂಧಿವರೆಗೆ ಎಲ್ಲರು ನಮ್ಮ ಶತ್ರುಗಳೇ, ಎಲ್ಲರು ನಮ್ಮನ್ನ ಒಯ್ಕೊಳೇ ಅವರೇ. ಮನೆ ಸಂಭಾಲಿಸೊ ಹೆಂಡತಿ, ದೇಶನ ಸಂಭಾಲಿಸಿದ ಗಾಂಧಿ ಇಬ್ಬರು, ನಮ್ಮನ್ನ ಎದುರು ಹಾಕಿಕೊಂಡ್ರೆ, ನಮ್ಗತಿ ಏನಾಗಬೇಡ ನೀವೇ ಯೋಚನೆ
ಮಾಡಿ.
ಎಲ್ಲರೂ ಕುಡುಕರನ್ನ ನಿರ್ಜೀವ ವಸ್ತುಗಳಿಗಿಂತ ಹೀನಾಯವಾಗಿ ನೋಡ್ತಾರೆ. ಆದರೆ ಕೆಲವು ಪ್ರಾಜ್ನರು ನಮ್ಮನ್ನ ಚಿಕ್ಕ ಮಕ್ಕಳಿಗೆ, ಇನ್ನು ಕೆಲವರು ನಮ್ಮನ್ನ ದೇವರಿಗೆ ಹೋಲಿಸ್ತಾರೆ. ನಮ್ಮನ್ನ ಚಿಕ್ಕ ಮಕ್ಕಳಿಗೆ ಏನಕ್ಕೆ ಹೋಲಿಸ್ತಾರೆ ಅಂದ್ರೆ, ನಾವು ಚಿಕ್ಕ ಮಕ್ಕಳಂತೆ ಏನನ್ಸತ್ತೊ ಅದನ್ನ ಹೇಳ್ತೀವಿ, ಏನು ಮಾಡಬೇಕು ಅನ್ಸತ್ತೊ ಅದನ್ನ ಮಾಡ್ತೀವಿ. ಒಳಗೊಂದು ಹೊರಗೊಂದು ಇಟ್ಕೊಳಲ್ಲ. ಮಕ್ಕಳಂತ ಶುಧ್ಧ ಮನಸ್ಸು ನಮ್ಮ ಕುಡುಕರದು. ಒಳಗೊಂದು ಹೊರಗೊಂದು ಇಟ್ಕೊಂಡು, ನಮ್ಮನ್ನ ದ್ವೇಶಿಸ್ತಾನೆ ನಮ್ಮ ಮಧ್ಯೆ ತಿರಗ್ತಾ ಇರ್ತಾರಲ್ಲ ಅಂತವರಿಗಿಂತ ಸಾವಿರ ಪಟ್ಟು better ನಾವು. ಅಂತವರು ಸೂಳೇಗಳಿಗಿಂತ ಹೀನಾಯ. ಸೂಳೆಗಳು ಬರೀ ದೇಹ ಮಾತ್ರ ಮಾರ್ತಾರೆ, ಅವರ ಮನಸನ್ನಲ್ಲ. ಆದರೆ ಇಂತ ಅವರು, ದೇಹಗಳನ್ನೇ ತಾವು ಅಂತ ತಿಳ್ಕೊಂಡು, ಮನಸ್ಸಿಗೆ ಮರ್ಯಾದೆ ನೀಡದೆ ಅದನ್ನ ಮಾರ್ತಾರೆ. ಈ ಇಬ್ಬರಲ್ಲಿ ಯಾರು better ಅನ್ನೋದು ನೀವೆ ಯೋಚನೆ ಮಾಡಿ ನೋಡಿ ಅಲ್ವಾ..?
ಮುಂದುವರಿಯಲಿದೆ......
No comments:
Post a Comment