ನಮ್ಮ ಪ್ರೀತಿಯ ಅಂಕಲ್ ಇವರು ಅಪ್ಪು,
ಇವ್ರ ಪ್ರಕಾರ ಅಂಕಲ್ ಅಂತ ಕರಿಯೋದೆ ದೊಡ್ಡ ತಪ್ಪು.
ಆದರೆ ನಾವೇನು ಮಾಡೋದು ಹೇಳು ಅಪ್ಪು,
ನಿನಗೆ ವಯಸಾಗಿದೆ ನೀನಿದನ ಒಪ್ಪು.
(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.)
ನಾನಂದು ಅಂದೆ ನನಗೆ, ನೀ ಬೇಡವೆಂದು.
ನಾನಿಂದು ಎನುವೆ ನನಗೆ, ನೀ ಸಾಕೆಂದು.
ಕುಳಿತಿಹೆನು ನಾನು, ಆ ದಿನವ ನೆನೆದು.
ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು.
ತಿಳಿಯುತಿಲ್ಲ ನನಗೆ, ಹಾಗೇಕೆ ಅಂದೆನೆಂದು .
ಬಯಸುತಿರುವೆ ನಾನು, ನೀನದನ ಮರೆಯುವೆ ಎಂದು.