Wednesday, December 3, 2008

ನಕಾರಾತ್ಮಕ ಪ್ರೇಮಲೋಕ

ನಾನಿ:ನೀನ
ನೀನ:ನನ್ನನ್ನಾ?
ನಾನಿ:ನಿನ್ನನ್ನೇ. ನೀನು .... ನೀನು ....
ನೀನ : ನಾನು...?
ನಾನಿ : ನೀನು ನನ್ನನ್ನ ನೆನೆ .
ನೀನ : ನಿನ್ನನ್ನಾ?
ನಾನಿ : ನನ್ನನ್ನೇ.
ನೀನ : ನಾ ನಿನ್ನನ್ನಾ, ನೀ ನನ್ನನ್ನಾ?
ನಾನಿ: ನಾ ನಿನ್ನನ್ನ , ನೀ ನನ್ನನ್ನ.

ನೀನ : ನೀ ನಾನಾ?ನಾ ನೀನಾ?
ನಾನಿ: ನೀನು ನೀನೇ. ನಾನು ನಾನೇ.
ನೀನ:ನೀನೇ ನಾನು.ನಾನೇ ನೀನು.
ನಾನಿ: ನೀನು ನೀನ, ನಾನು ನಾನಿ.
ನೀನ: ನೀ ನನ್ನ ನಾನಿ, ನಾ ನಿನ್ನ ನೀನ.
ನಾನಿ: ನೀನೇ ನನ್ನ ನೀನ, ನಾನೇ ನಿನ್ನ ನಾನಿ.

ನಾನು : ನೀನನಾನಿನಾನುನೀನುನೀನೆನಾನುನಾನೇನೀನುನಿನ್ನನ್ನಾನನ್ನನ್ನೇ